ಕನ್ನಡ ನಾಡು | Kannada Naadu

ರಾಜ್ಯಕ್ಕೆ ಮಾದರಿಯಾದ ಸಿಂಧನೂರು ತಾಲೂಕ ಕಸಾಪ:  ಶ್ರೀ ಷ.ಬ್ರ. ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಅಭಿಮತ

01 May, 2024



ಸಿಂಧನೂರು : ಕನ್ನಡ ಸಾಹಿತ್ಯದ ಕಾರ್ಯ ಶ್ಲಾಘನೀಯ,  ಕನ್ನಡ ಎಂದರೆ ಅಷ್ಟೇ ಪ್ರೀತಿಯಿಂದ ಗೌರವದಿಂದ ಹಲವು ಕಾರ್ಯಕ್ರಮಗಳನ್ನು ವಿಶೇಷ ಮತ್ತು ವಿಶಿಷ್ಟವಾಗಿ ಮಾಡಿ.  ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ಸಹಕರಿಸಿದಂತ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ, ಆಜೀವ ಸದಸ್ಯರುಗಳಿಗೆ ಕನ್ನಡದ ಮನಸ್ಸುಗಳಿಗೆ ಸರಿಯಾದ ರೀತಿಯಲ್ಲಿ ಲೆಕ್ಕ ಪತ್ರ ತಿಳಿಸುವ ಮೂಲಕ ೨೦೨೩-೨೪ ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮಾಡಿದ್ದು ನೋಡಿದರೆ ನಮಗೆ ಅತಿವ ಸಂತಸ ತಂದಿದೆ. ಇಷ್ಟು ಪರಿಪೂರ್ಣ ಕಾರ್ಯಕ್ರಮ ಮಾಡಿರುವುದು ನೋಡಿದರೆ ರಾಜ್ಯದಲ್ಲಿ ಸಿಂಧನೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮುಂಚುಣಿಯಲ್ಲಿದೆ ಎನ್ನುವುದಕ್ಕೆ ಎರಡು ಮಾತಿಲ್ಲ ಎಂದು ಮಸ್ಕಿ ಪಟ್ಟಣದ ಗಚ್ಚಿನ ಹಿರೇಮಠ ಶ್ರೀ ಷ ಬ್ರ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

             ಅವರು ಸಿಂಧನೂರು ನಗರದ ಆದಿಶೇಷನ ಗುಡಿ ಹಿಂದುಗಡೆ ಶೇಖ್ ಬಷೀರ್ ಏತ್ಮಾರಿ ಅವರ ಜಾಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಸಿಂಧನೂರು ಆಯೋಜಿಸಿದ್ದ ಎರಡನೇ ವರ್ಷದ ವರ್ಷಾಚರಣೆ ಸಂಭ್ರಮ ಹಾಗೂ ೨೦೨೩-೨೪ನೇ ಸಾಲಿನ ವಾರ್ಷಿಕ ವರದಿ ಮಂಡನೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿ ಎಲ್ಲರಿಗೂ ಸಿಹಿ ಹಂಚಿ ಮಾತನಾಡಿದರು.

 ೨೦೨೩-೨೪ ನೇ ೫೭ ದತ್ತಿ ಉಪನ್ಯಾಸ ಕಾರ್ಯಕ್ರಮದ ವಿವರವನ್ನು ಉಪನ್ಯಾಸಕಿ ಆನಂದಿ ಲಾಹೋಟಿ ಮಂಡಿಸಿದರು.  

      ೨೦೨೩-೨೪ ನೇ ಸಾಲಿನ ವಾರ್ಷಿಕ ವರದಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅವರು ದತ್ತಿ ಹಾಗೂ ದಾರ್ಶನಿಕರ ಮಾಸಿಕ ಕವಿಗೋಷ್ಠಿ ಮತ್ತು ಇತರೆ ಕಾರ್ಯಕ್ರಮಗಳ  ಒಟ್ಟು ಖರ್ಚು 117000=00 ಆಗಿದೆ ಎಂದು ಖರ್ಚಿನ ವಿವರ ನೀಡಿದರು. ಹಿಂದಿನ ವರ್ಷ ೨೦೨೨-೨೩ನೇ ಸಾಲಿನ ಹೆಚ್ಚುವರಿಯಾಗಿ 120940=00 ಎರಡು ವರ್ಷಗಳ ಒಟ್ಟು ಖರ್ಚು 237940=00 ರೂಪಾಯಿ ಖರ್ಚಾದರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಿಂಧನೂರು ಸಾರ್ವಜನಿಕರಿಂದ ಜಮಾ ಆದ ಹಣದ ವಿವರ ಇಂತಿದೆ. ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 35800=00. ಎ. ರಾಮಬಾಬು ಅರಗಿನಮರಕ್ಯಾಂಪ ಇವರಿಂದ 20000=00. ಸಿಂಧನೂರು ಜಮಾಅತ್ ಇಸ್ಲಾಮಿ ಹಿಂದ್ ವತಿಯಿಂದ 15000=00. ಡಾ. ಚನ್ನನಗೌಡ ಪೊಲೀಸ್ ಪಾಟೀಲ. 5000=00. ವೀರೇಶ ನಾಡಗೌಡ ಗುತ್ತಿಗೆದಾರ,  5000=00. ಸತ್ಯನಾರಾಯಣ ಶ್ರೇಷ್ಠಿ ಆಕ್ಸಪರಡ ಕಾಲೇಜು, 5000=00. ಸಿಂಧನೂರು ತಾಲೂಕ ಆಡಳಿತ ತಹಸಿಲ್ದಾರರಿಂದ 2500=00. ಅಶೋಕ ಜಿ. ಜೆ. ಗುತ್ತಿಗೆದಾರ 2500=00. ಶರಣಪ್ಪ ತೆಂಗಿನಕಾಯಿ, 2500=00. ಶಿವುಕುಮಾರ ಜವಳಿ, 2500=00. ಚಂದ್ರಶೇಖರಗೌಡ ಕನಸಾವಿ ಗುತ್ತಿಗೆದಾರ 2500=00.ವಿ. ಸಿ. ಪಾಟೀಲ ಇಂಜನಿಯರ್ 2500=00. ಶರಣಬಸವ ಮೇರಿನಾಳ 2500=00. ಮಹಾನಂದಿ ನವಲಿ ಆಫೀಸರ್ 2500=00. ವೈ. ನರೇಂದ್ರನಾಥ ವಿದ್ಯಾ ಪಬ್ಲಿಕ್ ಸ್ಕೂಲ್ 2500=00. ಆರ್. ಸಿ. ಪಾಟೀಲ ಪಾಟೀಲ ಶಿಕ್ಷಣ ಸಂಸ್ಥೆ 2500=00. ಸುಭಾಷ ಪ್ರಭು ಟ್ರೇಡರ್ಸ್ 2500=00.ಉಮೇಶಗೌಡ ವಿಟ್ಲಾಪೂರ ಅರಳಹಳ್ಳಿ 2500=00. ಶ್ರೀ ಮತಿ ನಿಹೇರಿಕಾ ಸಂಗಮೇಶ ಅಲಬನೂರು 2500=00. ಶೇಖ್ ಬಷೀರ್ ಏತ್ಮಾರಿ 1500=00. ಶರಭಯ್ಯಸ್ವಾಮಿ ಹಿರೇಮಠ 1000=00. ಒಟ್ಟು 120800=00 ಜಮಾ ಆಗಿದೆ. ಒಟ್ಟು 117140=00 ಹೆಚ್ಚುವರಿಯಾಗಿದೆ.  ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಹಕರಿಸಿದ ತಾಲೂಕಿನ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು, ವ್ಯಾಪಾರಿಗಳು, ಕೃಷಿ ಕೂಲಿ ಕಾರ್ಮಿಕರು, ಮಹಿಳೆಯರು , ಮಾಧ್ಯಮದ ಸ್ನೇಹಿತರು, ದಾನಿಗಳು,  ಕವಿ ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಆಜೀವ ಸದಸ್ಯರು, ಕನ್ನಡದ ಮನಸ್ಸುಗಳು ಸೇರಿ ಕನ್ನಡದ ಸಾಹಿತ್ಯದ ತೇರು ಎಳೆಯಲು ಸಹಕರಿಸಿದ ಎಲ್ಲರಿಗೂ ಸಿಂಧನೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸದಾ ಚಿರಋಣಿ ಯಾಗಿರುತ್ತದೆ ಎಂದು ಪಂಪಯ್ಯಸ್ವಾಮಿ ಸಾಲಿಮಠ ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಎಸ್ ಎಸ್ ಹಿರೇಮಠ ನಿವೃತ್ತ ಪ್ರಾಂಶುಪಾಲರು. ಶರಣಪ್ಪ ತೆಂಗಿನಕಾಯಿ. ಶಿವುಕುಮಾರ ಜವಳಿ. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ. ಜಮಾಅತ್ ಇಸ್ಲಾಮಿ ಹಿಂದ್ ಅಧ್ಯಕ್ಷ ಟಿ, ಹುಸೇನಸಾಬ. ಡಾ ಚನ್ನನಗೌಡ ಪೊಲೀಸ್ ಪಾಟೀಲ, ಉಪನ್ಯಾಸಕಿ ಆನಂದಿ ಲಾಹೋಟಿ. ಮಹಿಳಾ ಸದಸ್ಯೆ ಶ್ರೀಮತಿ ಭಾರತಿ ತಿವಾರಿ. ವಿ, ಸಿ ಪಾಟೀಲ್. ಶರಣಬಸವ ಮೇರಿನಾಳ, ವೀರೇಶ ಶಿವನಗುತ್ತಿ, ಶರಭಯ್ಯಸ್ವಾಮಿ ಹಿರೇಮಠ, ಅಮರೇಶ ಎಂ ಕೆ, ಸಂಗಮೇಶ ಮೆಂಟಿಗೇರಿ, ಕೋಶಾಧ್ಯಕ್ಷ ಶೇಖ್ ಬಷೀರ್ ಏತ್ಮಾರಿ. ಗುಂಡುರಾವ್ ಚನ್ನಳ್ಳಿ ಪ್ರಾರ್ಥನೆ ಸಲ್ಲಿಸಿದರು, ಶಿಕ್ಷಕ ಶಂಕರ ದೇವರು ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by